ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚಾರಣೆಯನ್ನು ಆಚರಿಸಲಾಯಿತು. ಸುಮಾರು 600 ವಿದ್ಯಾರ್ಥಿಗಳಿಂದ ಯೋಗ ಮತ್ತು ಆಸನಗಳನನ್ನು ಮಾಡಲಾಯಿತು. ಸೂರ್ಯ ನಮಸ್ಕಾರ, ಪ್ರಾಣಾಯಾಮ, ವಜ್ರಾಸನ, ಪರ್ವತಾಸನ, ಪದ್ಮಾಸನ, ಅರ್ಧಪದ್ಮಾಸನ, ಸರ್ವಂಗಾಸನ, ವಕ್ರಾಸನ, ವೀರಾಸನ, ಶವಾಸನ, ವಿವಿಧ ಆಸನಗಳನ್ನು ಮಕ್ಕಳು ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಸುಮಾರ 152 ರಾಷ್ಟ್ರಗಳು ಯೋಗಾಸನವನ್ನು ಆಚರಿಸುತ್ತಿದ್ದಾರೆ, ಇಡೀ ರಾಷ್ಟ್ರ ಯೋಗದ ಮಹತ್ವವನ್ನು ಅರಿತು ಯೋಗವನ್ನು ಸ್ವೀಕರಿಸಿದ್ದಾರೆ. ಜೋತೆಗೆ ಯೋಗದಿಂದ ದೇಹ ಹಾಗೂ ಮನಸ್ಸಿಗಾಗುವ ಲಾಭಗಳ ಬಗ್ಗೆ ವಿವರಿಸಿದರು.
ಸಂಸ್ಥೆಯ ಗೌರವ ಸದಸ್ಯ ರಾಜಶೇಖರ ಕೌಲಗಿ ಮಾತನಾಡಿ ಯೋಗವು ರೋಗ ಮುಕ್ತ ಮಾಡುವ ಔಷಧ ಆಗಿದೆ, ಪ್ರಾರಂಭದಲ್ಲಿ ಯೋಗವು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿತ್ತು ಯೋಗಿಗಳು, ಸಾಧುಸಂತರು ಮಾತ್ರ ಯೋಗವನ್ನು ಅಭ್ಯಾಸಿಸುತ್ತಿದ್ದರು. ಆದರೆ ಪ್ರಸ್ತುತ ಯೋಗದ ಮಹತ್ವವನ್ನು ಭಾರತವು ಇಡೀ ಪ್ರಪಂಚಕ್ಕೆ ಪರಿಚಯಿಸಿದೆ ಎಂದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿಗಳಾದ ಸುನೀಲ ನಾವಲಗಿ, ಅಮರೇಶ ಅಲಗುಂಡಗಿ, ಮುಖ್ಯಗುರುಗಳಾದ ಎಸ್.ಎಸ್.ದೊಡಮನಿ, ಎಸ್.ಬಿ.ಹೆಗಳಾಡಿ ಯೋಗ ತರಬೇತಿ ನೀಡಿದ ಶಿಕ್ಷಕರುಗಳಾದ ಪ್ರೀತಿ ಕಾಳೆ, ದಾನಮ್ಮ ವಾಲಿ, ಮಹೇಶ ಸಂಗಮ, ಸಂಗಮೇಶ ಆಲಮೇಲ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Post comment