ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಡಳಿತಾಧಿಕಾರಿ ರಾಜಶೇಖರ ಮೋಟಗಿ ಮಹರ್ಷಿ ವಾಲ್ಮೀಕಿ ಮಹಾಕಾವ್ಯ ರಾಮಾಯಣ ಬರೆದು ಅದರಲ್ಲಿ ಭಾರತೀಯ ಸಂಸ್ಕ್ರತಿ ಹಾಗೂ ಸಮಾಜದಲ್ಲಿ ಅನುಸರಿಸಬೇಕಾದ ಮೌಲ್ಯಗಳನ್ನು ತಿಳಿಸಿದ್ದಾರೆ. ಈ ಮಹಾ ಕಾವ್ಯವು ಅನೇಕ ಜನರ ಜೀವನವನ್ನು ಬದಲಿಸಿದ ಸಾಧನಾ ಸಿದ್ಧಿ ಕಾವ್ಯವಾಗಿದೆ ಹಾಗೂ ರಾಮಾಯಣದಲ್ಲಿ ಬರುವ ಒಂದೊಂದು ಸನ್ನಿವೇಶಗಳು ಓದುಗರ ವಿವೇಕ, ಬುದ್ದಿ, ಮನಸ್ಸು ಕ್ರೀಯೆ ಕರ್ಮಗಳನ್ನು ಸೂಕ್ತದಾರಿಯಲ್ಲಿ ನಡೆಸುವ ಕಾರ್ಯಮಾಡುತ್ತದೆ ಎಂದರು.

ಮುಖ್ಯಗುರು ಎಸ್.ಎಸ್. ದೊಡಮನಿ ಮಾತನಾಡಿ ರಾಮಾಯಣವು ಭಾರತೀಯರ ಜೀವನ ಚರಿತ್ರೆಯನ್ನು ಮತ್ತು ಸಂಸ್ಕøತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ. ಸಂಸ್ಕøತದಲ್ಲಿ ರಚಿಸಲಾಗಿರುವ ರಾಮಾಯಣ ಮಹಾ ಕಾವ್ಯವು 24 ಸಾವಿರ ಶ್ಲೋಕಗಳನ್ನು ಹೊಂದಿದೆ ಎಂದರು.

ಇನ್ನೋರ್ವ ಮುಖ್ಯಗುರು ಎಸ್.ಬಿ. ಹೆಗಳಾಡಿ ಇಂತಹ ಮನೋಹರವಾದ, ಪವಿತ್ರವಾದ ಹಾಗೂ ಶ್ರೇಷ್ಠವಾದ ಮಹಾಕಾವ್ಯವನ್ನು ರಚನೆಮಾಡಿದ ವಾಲ್ಮೀಕಿ ಮಹರ್ಷಿಯು ಋಷಿ ಪುಂಗವರಲ್ಲೇ ಶ್ರೇಷ್ಠ ಮಹರ್ಷಿಯಾಗಿ ಉನ್ನತ ಸ್ಥಾನವನ್ನು ಗಳಿಸಿ ಕಾವ್ಯಸಿರಿಯ ಕೊಂಬೆಯ್ನನೇರಿದ ಕೊಗಿಲೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಜಾಸ್ಮೀನ ಕಂದಗಲ, ಲಕ್ಮೀ ಡೋಣೂರ, ಸೋನಲ ತಿವಾಡಿ ಪ್ರಶಾಂತ ಪರಜಣ್ಣವರ ಹಾಗೂ ಎಲ್ಲ ಶಿಕ್ಷಕವೃಂದ ಉಪಸ್ಥಿತರಿದ್ದರು ಪ್ರಶಾಂತ ಕುಲಕಣ ್ ಸ್ವಾಗತಿಸಿದರು, ಜ್ಯೋತಿಪ್ರಭಾ ಗಡೆದ ನಿರೂಪಿಸಿದರು, ವಿನೋದ ಉತ್ನಾಳ ವಂದಿಸಿದರು.

Leave a Reply

Your email address will not be published. Required fields are marked *

Post comment