ಎಕ್ಸಲಂಟ್ ವಿದ್ಯಾರ್ಥಿಗಳಿಂದ ವಿಜ್ಞಾನ ಪಾತ್ಯಕ್ಷಿಕೆ ಪ್ರದರ್ಶನ

ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚಾರಣೆಯ ಅಂಗವಾಗಿ ಹಮ್ಮಿಕೊಂಡ ವಿಜ್ಞಾನ ಪಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಖ್ಯಾತ ಕೃಷಿ ವಿಜ್ಞಾನಿ ಪರಶುರಾಮ ಪಾತ್ರೋಟಿ ಎಕ್ಸಲಂಟ್ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಮಕ್ಕಳ ವೈಜ್ಞಾನಿಕ ಪ್ರತಿಭೆಗಳಿಗೆ ಪ್ರೋತ್ಸಾಹ ಅನನ್ಯವಾಗಿದೆ. ಈ ಪ್ರದರ್ಶನದಲ್ಲಿ ಮಕ್ಕಳು ಮುಖ್ಯವಾಗಿ ಕೃಷಿ, ಪರಿಸರ, ಟ್ರಾಫಿಕ್ ಸಮಸ್ಯಾಪರಿಹಾರ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರದರ್ಶನಗಳು ಮಕ್ಕಳಿಂದ ಅನಾವರನಗೊಂಡಿವೆ ಎಂದರು, ಇದರಿಂದ ಮಕ್ಕಳು ಯಾವ ಕ್ಷೇತ್ರದಲ್ಲಿ ಮುಖಮಾಡುತ್ತಿದ್ದಾರೆ ಎಂದು ಅರಿತುಕೊಳ್ಳಬಹುದು. ಮುಖ್ಯವಾಗಿ 2019ರ ಘೋಷಣೆಯಂತೆ ಜನತೆಗಾಗಿ ವಿಜ್ಞಾನ ಹಾಗೂ ವಿಜ್ಞಾನಕ್ಕಾಗಿ ಜನತೆ ಎಂಬಂತೆ ಮಕ್ಕಳು ವಿಜ್ಞಾನ, ತಂತ್ರಜ್ಞಾನ ಹಾಗೂ ಸಂಶೋಧನೆಗಳಿಗೆ ಹೆಚ್ಚು ಒತ್ತುಕೊಡಬೇಕೆಂದರು ಹಾಗೂ ಮಕ್ಕಳು ಈಗಿನಿಂದಲೇ ವೈಜ್ಞಾನಿಕ ಮನೋಭಾವನೆ ಅಳವಡಿಸಿಕೊಂಡು ದೇಶಕ್ಕೆ ಕೊಡುಗೆ ನೀಡಬೇಕೆಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಪ್ರಧಾನಕಾರ್ಯದರ್ಶಿ ಶಿವಾನಂದ ಕೆಲೂರ , ಮಕ್ಕಳು ಮುಖ್ಯವಾಗಿ ಸಮಸ್ಯೆಗಳನ್ನು ಕಂಡುಹಿಡಿಯಬೇಕು, ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೇ ಸಂಶೋಧನೆಯಾಗಿದೆ. ಜಗತ್ತಿನಲ್ಲಿ ಸಾವಿರಾರು ಸಂಶೋಧನೆಗಳಾದರೂ ಇನ್ನೂ ಹಲವಾರು ಸಮಸ್ಯೆಗಳಿಗೆ ಪರಿಹಾರವಿಲ್ಲದೆ ನಾವು ಬದುಕುತ್ತಿದ್ದೇವೆ ಆ ಸಮಸ್ಯೆಗಳ ಪರಿಹಾರಕ್ಕಾಗಿ ಮಕ್ಕಳು ಸಂಶೋಧನೆಕೈಗೊಳ್ಳಬೇಕೆಂದರು.

ಈ ಸಂದರ್ಭದಲ್ಲಿ 50 ವಿಜ್ಞಾನ ಪ್ರಾತ್ಯಕ್ಷೀಕೆಯಲ್ಲಿ 5 ಸ್ಥಾನಗಳಿಗೆ ಆಯ್ಕೆ ಮಾಡಿ ಪ್ರಶಸ್ತಿ ಮೊತ್ತವನ್ನು ನೀಡಲಾಯಿತು. ಪ್ರಥಮ ಸ್ಥಾನವನ್ನು ಸ್ನೇಹಾ ಹಾರುಗೇರಿ ಮಾನವ ಕಿವಿಯ ಕಾರ್ಯವೈಖರಿ ಪ್ರಾತ್ಯಕ್ಷೀಕೆ, ದ್ವಿತೀಯ ಸ್ಥಾನ ಪ್ರಜ್ವಲ್ ಸುರಗಿಹಳ್ಳಿ, ಅಗ್ರೋಬೊಟ್, ತೃತೀಯ ಸ್ಥಾನ ಸುಮೀತ ಕುಂಬಾರ ಹಾಗೂ ಸಂಗಡಿಗರು ನೀರಿನ ಒತ್ತಡ ಶಕ್ತಿಯಿಂದ ಟ್ರಾಫಿಕ್ ಕಂಟ್ರೋಲ್ ಮಾಡುವ ಕುರಿತು, ನಾಲ್ಕನೇ ಸ್ಥಾನ ಆಕಾಂಕ್ಷಾ ಪುರಾಣ ಕ ಸ್ಯಾಟ್‍ಲೈಟ್ ಕಮ್ಯೂನಿಕೇಷನ್ ಹಾಗೂ ಐದನೇ ಸ್ಥಾನ ಸಹನಾ ಮಳಸಿದ್ದ ಹಾಗೂ ಸಂಗಡಿಗರು ಪಾರ್ಥೇನಿಯಮ್ ಮತ್ತು ಗೋಮೂತ್ರದಿಂದ ಕೀಟನಾಶಕ ತಯಾರಿಕೆ.

ಈ ಸಂದರ್ಭದಲ್ಲಿ ನಿಣಾರ್ಯಕರಾಗಿ ರಾಘವೇಂದ್ರ ಮಿಸಾಳೆ ಹಾಗೂ ಸಿ.ಎಸ್.ಉಂಡೋಡಿ, ಮುಖ್ಯಗುರುಗಳಾದ ಎಸ್.ಎಸ್.ದೊಡಮನಿ ಹಾಗೂ ಎಸ್.ಬಿ. ಹೆಗಳಾಡಿ, ಕಾಶೀನಾಥ ಉಣ ್ಣಭಾವಿ, ಜ್ಯೋತಿಪ್ರಭಾ ಗಡೇದ, ಶಾಹನಾವಾಜ ಕೋಲಾರ, ಮಂಜುನಾಥ ಕರಗಲ್ಲಪಟ್ಟಿ, ಪ್ರಶಾಂತ ಪರಜಣ್ಣವರ ಮುಂತಾದವರು ಉಪಸ್ಥಿತರಿದ್ದರು. ಭಾಗ್ಯಶ್ರೀ ದೊಡಮನಿ ಸ್ವಾಗತಿಸಿದರು, ಶ್ವೇತಾ ಟಕ್ಕಳಕಿ ಹಾಗೂ ಶೃಷ್ಠಿ ಚಿಂಚೋಳಿ ನಿರೂಪಿಸಿದರು, ಪೂಣ ್ಮಾ ಗಂಗನಗೌಡರ ವಂದಿಸಿದರು.

Leave a Reply

Your email address will not be published. Required fields are marked *

Post comment