ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 63ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸುಮಾರು 120 ಅಡಿ ಉದ್ದ ಹಾಗೂ 80 ಅಡಿ ಅಗುಲದಲ್ಲಿ ಕರ್ನಾಟಕ ನಕ್ಷೆ ಮಕ್ಕಳಿಂದ ರಚನೆಗೊಂಡು, ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಹಲವಾರು ಭಾಷೆಗಳಿಗೆ ನಮ್ಮ ಕನ್ನಡ ಭಾಷೆಯು ಮೂಲಾಧಾರವಾಗಿದೆ, ಯಾರು ಕನ್ನಡವನ್ನು ಉತ್ತಮವಾಗಿ ನಿರ್ರಗಳವಾಗಿ ಮಾತನಾಡಲು ಹಾಗೂ ಬರೆಯಲು ಕಲೆಯುತ್ತಾರೋ ಅವರು ಆಂಗ್ಲ ಭಾಷೆಯನ್ನು ಚನ್ನಾಗಿ ಅರಿತುಕೊಳ್ಳಬಹುದು ಎಂದರು. ಕನ್ನಡ ಜಲ ನೆಲ ಭಾಷೆಯ ಉಳಿವಿಗಾಗಿ ಎಲ್ಲರು ತಮ್ಮ ಸೇವೆಯನ್ನು ನೀಡಬೇಕೆಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಮಂಜುನಾಥ ಕೌಲಗಿ ಕನ್ನಡ ಭಾಷೆಗೆ 300 ವರ್ಷಗಳ ಇತಿಹಾಸವಿದೆ ಮೊದಲ ಕನ್ನಡ ರಾಜಮನೆತನ ಕದಂಬ ಎಂದರು. ನಮ್ಮ ಭಾಷೆಯನ್ನು ಉಳಿಸಿ ಬೆಳಿಸಲು ಎಲ್ಲ ಕಟಿಭದ್ದರಾಗಬೇಕು ನಮ್ಮ ಭಾಷೆಯನ್ನು ನಾವುಗಳು ಪ್ರೀತಿಸಬೇಕು ಎಂದರು. ಕನ್ನಡದ ಭಾಷೆಯನ್ನು ಕಲಿತವರಿಗೆ ಸರಕಾರಿ ಕೆಲಸದಲ್ಲಿ ಮೀಸಲಾತಿ ನೀಡುವಂತೆ ಸರಕಾರ ಗಮನ ಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಸಂಸ್ಕøತ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಎಸ್.ಎಸ್. ದೊಡಮನಿ, ಎಸ್.ಬಿ. ಹೆಗಳಾಡಿ, ಚಿತ್ರಕಲಾ ಶಿಕ್ಷಕ ಮುಸ್ತಾಕ ತಿಕೋಟಾ, ಸುಧಾಕರ ಅಲ್ಲವಗೋಳ, ಸತೀಶ ವಾಲಿ, ಬಸವರಾಜ ವಾಲಿಕಾರ, ಜಯಶ್ರೀ ಹದಿಮೂರ, ಪ್ರವೀಣ ಬಿರಾದಾರ, ಎಜಾಜ ಜಮಾದಾರ,ಬಿ,ಎಸ್,ಹತ್ತಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಮೋಘಸಿದ್ದ ಮಾಲಗಾರ ಸ್ವಾಗತಿಸಿದರು, ವಿದ್ಯಾರ್ಥಿ ಸುಪ್ರೀಯಾ ಜೋಶಿ ಹಾಗೂ ಐಶ್ವರ್ಯ ಮಮದಾಪುರ ನಿರೂಪಿಸಿದರು, ಭಾಗ್ಯಜ್ಯೋತಿ ಬಿರಾದಾರ ವಂದಿಸಿದರು.

Leave a Reply

Your email address will not be published. Required fields are marked *

Post comment