ಸಹನಾ ಶಕ್ತಿಯು ಆತ್ಮ ವಿಶ್ವಾಸ ಇಮ್ಮಡಿಗೊಳಿಸುವ ಅಸ್ತ್ರ
ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲಬಾಹದ್ಧೂರ ಶಾಸ್ತ್ರೀಜಿ ಅವರ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡುತ್ತ ವ್ಯಕ್ತಿಗಳಲ್ಲಿ ಮುಖ್ಯವಾಗಿ ಸಹನಾ ಮನೋಭಾವನೆ ಬೆಳಸಿಕೊಳ್ಳಬೇಕು ಗಾಂಧೀಜಿಯವರ ಮೂಲ ತತ್ವವೇ ಸಹನಾ ಶಕ್ತಿಯಾಗಿದೆ ಎಂದರು. ಶಾಂತಿ, ಸತ್ಯಾಗ್ರಹ, ಅಹಿಂಸೆಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಪ್ರಪಂಚವೇ ಗಾಂಧೀಜಿಯವರ ತತ್ವಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಸರ್ವಾಧಿಕಾರಿ ಅಡಾಲ್ಫ ಹಿಟ್ಲರ ಕೂಡಾ ಗಾಂಧೀಜಿಯವರ ಸಹನಾ ಶಕ್ತಿಗೆ ತಲೆಬಾಗಿದ್ದರು. ಸಹನಾ ಶಕ್ತಿಯೂ ವ್ಯಕ್ತಿಯಲ್ಲಿ ಆತ್ಮ ವಿಶ್ವಾಸ ಇಮ್ಮಡಿಗೊಳಿಸುತ್ತದೆ ಎಂದರು.  ಆಡಳಿತಾಧಿಕಾರಿ ರಾಜಶೇಖರ ಮೋಟಗಿ ಮಾತನಾಡುತ್ತ ಗಾಂಧೀಜಿಯವರು ಮನುಷ್ಯನನ್ನು ಪ್ರೀತಿಸಬೇಕು ದೇವರು ಪ್ರತಿ ವ್ಯಕ್ತಿ ಹಾಗೂ ಪ್ರಾಣ ಗಳಲ್ಲಿ ನೆಲೆಸಿದ್ದಾನೆ ಸತ್ಯ, ಅಹಿಂಸೆ,ಪ್ರೀತಿ ನಂಬಿಕೆ ವಿಶ್ವಾಸಗಳು ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕೊಡ್ಯೊಯುತ್ತದೆ ಎಂದರು.  ಮುಖ್ಯಗುರು ಎಸ್.ಎಸ್.ದೊಡಮನಿ ಮಾತನಾಡುತ್ತ ದೇಶ ಕಂಡ ಅಪ್ರತೀಮ ನಾಯಕರಲ್ಲಿ ಮಹತ್ಮಾ ಗಾಂಧೀಜಿ ಹಾಗೂ ಲಾಲಬಹದ್ಧೂರ ಶಾಸ್ತ್ರೀ ಆಗಿದ್ದಾರೆ. ಅವರ ತತ್ವಗಳಿಂದ ಎಲ್ಲರ ಮನಗಳಲ್ಲಿ ನೆಲೆಸಿದ್ದಾರೆ ಎಂದರು.  ಇನ್ನೋರ್ವ ಮುಖ್ಯ ಗುರು ಎಸ್.ಬಿ. ಹೆಗಳಾಡಿ ಮಾತನಾಡುತ್ತ ಸತ್ಯ ಅಹಿಂಸೆ ಶಾಂತಿ ಉಪವಾಸ ಹಾಗೂ ಕರ್ತವ್ಯ ಪ್ರಜ್ಞೆ ಮಹಾನ ನಾಯಕರಗಳ ಸಾಧನೆಯೇ ನಮಗೆ ಮಾದರಿ ಎಂದರು.  ಈ ಸಂದರ್ಭದಲ್ಲಿ ಅನೀಲ ಕೊರ್ತಿ, ಟಿ.ಎ.ಮುಲ್ಲಾ, ಬಿ.ಆರ.ಬಿರಾದಾರ, ಬಿ.ಎಸ್.ಹತ್ತಿ, ಜಯಶ್ರೀ ಯಡವಣ್ಣವರ, ಪ್ರಶಾಂತ ಕುಲಕಣ ್, ಮುಕ್ತೇಶ ಉಬಾಳೆ ಹಾಗೂ ಎಲ್ಲ ಶಿಕ್ಷಕವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕುಮಾರಿ ಐಶ್ವರ್ಯ ಬಿರಾದಾರ ಸ್ವಾಗತಿಸಿದರು,  ರಮ್ಯ ಜೋಷಿ ನಿರೂಪಿಸಿದರು, ಸೌಮ್ಯ ಕೊಣದಿ ವಂದಿಸಿದರು.

Leave a Reply

Your email address will not be published. Required fields are marked *

Post comment