ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿ ಪ್ರತಿನಿಧಿ ರಮ್ಯ ಜೋಷಿ ಮಾತನಾಡಿ ಸತತ ಅಧ್ಯಯನವೇ ಮಕ್ಕಳ ಮೂಲ ಮಂತ್ರವಾಬೇಕು ಇದರಿಂದಲೇ ನಮ್ಮ ಗುರಿ ಸಾಧಿಸಲು ಸಾಧ್ಯ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡಿದ ಅವರು ಮಕ್ಕಳು ಆಸಕ್ತಿ ಇಲ್ಲದ ವಿಷಯದಲ್ಲಿ ಪಾಲಕರು ಒತ್ತಡ ಹೇರಿದಾಗ ಮಕ್ಕಳು ಅದನ್ನು ನಯವಾಗಿ ತಿರಸ್ಕರಿಸುವ ಗುಣವನ್ನು ರೂಡಿಸಿಕೊಳ್ಳಬೇಕು ಎಂದರು. ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳಿಗಿಂತ ವಿಷಯ ಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕೆಂದರು, ಜ್ಞಾನವೇ ಜೀವನ ರೂಪಿಸುವ ಸಾಧನವಾಗಿದೆ ಎಂದರು.
ಅತಿಥಿಗಳಾದ ಮುಖ್ಯೋಪಾದ್ಯಾಯ ಎಸ್.ಎಸ್. ದೊಡಮನಿ ಮಾತನಾಡಿ ಮಕ್ಕಳು ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು, ಸಾಮಾಜಿಕ ಜಾಲತಾಣಗಳಗೆ ಒತ್ತು ನೀಡದೇ ಪುಸ್ತಕಗಳ ಮೊರೆ ಹೊಗಬೇಕೆಂದರು. ಪುಸ್ತಕಗಳಲ್ಲಿ ಜ್ಞಾನ ಭಂಡಾರವೇ ಅಡಗಿರುತ್ತದೆ ಎಂದರು.
ಇನ್ನೂರ್ವ ಅತಿಥಿ ಮುಖ್ಯೋಪಾದ್ಯಾಯ ಎಸ್.ಬಿ. ಹೆಗಳಾಡಿ ಮಾತನಾಡಿ ಪ್ರಥಮ ಪ್ರಧಾನಿ ಜವಹಾರಲಾಲ ರವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುತ್ತಿದ್ದೆವೆ ಏಕೆಂದರೆ ಜವಹಾರಲಾಲ ರವರು ಮಕ್ಕಳ ಮೇಲೆ ತುಂಬಾ ಪ್ರೀತಿ ಹಾಗೂ ದೇಶದ ಭವಿಷ್ಯ ಎಂದು ಅರಿತ್ತಿದ್ದರು.
ವೇದಿಕೆ ಮೇಲೆ ವಿದ್ಯಾರ್ಥಿ ಪ್ರತಿನಿಧಿಗಳಾದ ಕಾರ್ತಿಕ ಕೆಲೂರ, ವೈಷ್ಣವಿ ಪಾಟೀಲ, ಶ್ರೇಯಾ ಪತಂಗಿ, ಸುಪ್ರಿತ ಮಲ್ಲೆದ, ಲಕ್ಮೀ ಬಿರಾದಾರ, ಸಂಪತ ಮುಂತಾದವರು ವೇದಿಕೆ ಮೇಲೆ ಆಸೀನರಾಗಿ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಈ ಸಂದರ್ಭದಲ್ಲಿ ಭಾಸ್ಕರ ಹೌಸಿನ ಶಿಕ್ಷಕರಾದ ಎಸ್.ಜಿ. ಕೋಲಾರ, ಎಲ್.ಬಿ. ದಳವಾಯಿ, ಪಿ.ಎಮ್. ಹಾದರಗೇರಿ, ಎ.ಜೆ. ಜಮಾದಾರ, ಆರ್.ವಿ. ದೇಶಪಾಂಡೆ, ವ್ಹಿ.ಯು. ಕುಲಕಣ ್ ಹಾಗೂ ಎಮ್.ಎಸ್. ಕರಗಲಪಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಸೈಯದ ಅರಸಲಾನ ಹಾಗೂ ಸುರಭಿ ಬಿರಾದಾರ ನಿರೂಪಿಸಿದರು ಚೈತ್ರಾ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

Post comment