ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳೆ ಕಾರ್ಯಕ್ರಮದ ಕೇಂದ್ರ ಬಿಂದು

ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಾಗಿ ವಿದ್ಯಾರ್ಥಿ ಪ್ರತಿನಿಧಿ ಅಭಿನಂದನ ಬೆಳಗಲಿ ಮಾತನಾಡಿ, ದೇಶದ ಏಳಿಗೆ ಮಕ್ಕಳ ಕೈಯಲ್ಲಿದೆ ನಾವೆಲ್ಲರೂ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಬೇಕಾಗಿದೆ ಎಂದರು.
ಇನ್ನೊರ್ವ ಅತಿಥಿ ವಿದ್ಯಾರ್ಥಿ ಪ್ರತಿನಿಧಿ ವರದಾ ನೀಲಮಣ ಗಾರ ಮಾತನಾಡಿ ದಿ.ಮಾಜಿ ಪ್ರಧಾನಿ ಜವಹಾರಲಾಲ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ, ಅವರಿಗೆ ಮಕ್ಕಳೆಂದರೆ ತುಂಬಾ ಪ್ರತಿ ಹಾಗೂ ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ ಎಂಬ ವಿಶ್ವಾಸ ಅವರದಾಗಿತ್ತು ಆದ್ದÀರಿಂದ ಅವರ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾರ್ಥಿ ಪ್ರತಿನಿಧಿ ಸ್ನೇಹಾ ಯೆಚ್ಚಿ, ಮಕ್ಕಳು ತಂದೆ ತಾಯಿ ಹಾಗೂ ಗುರುವಿನ ಮಾರ್ಗದರ್ಶನದಲ್ಲಿ ನಡೆಯಬೇಕು. ಉತ್ತಮ ಗುರಿಹೊಂದಿ ಸತತ ಪ್ರಯತ್ನದೊಂದಿಗೆ ಮುನ್ನಡಯಬೇಕು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳಾದ ಶ್ರೀಮಂತ ಪಡಸಲಗಿ, ಪ್ರತೀಕ್ಷಾ ಗದ್ದಿಗಿಮಠ, ಅಭಿಷೇಕ ಹಡಲಸಂಗ, ಚೇತನಾ ಬಗಲಿ, ಪೂರ್ವಿ ತಳವಾರ, ಸಾಕ್ಷೀ ಹಿರೇಮಠ, ನೇಹಾ ಬುಯ್ಯಾರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಭಾಗ್ಯಶ್ರೀ ಮತ್ತು ಅನುಪಮಾ ನಿರೂಪಿಸಿದರು ಸ್ನೇಹಾ ಅವಟಿ ಸ್ವಾಗತಿಸಿ ಸೌಮ್ಯ ಮೇಟಿ ವಂದಿಸಿದರು.

Leave a Reply

Your email address will not be published. Required fields are marked *

Post comment