73ನೇ ಸ್ವಾತಂತ್ರ್ಯದಿನಾಚಾರಣೆಯ ಮಕ್ಕಳು ತ್ರೀವರ್ಣ ಧ್ವಜಾಕೃತಿಯಲ್ಲಿ ಅರಳಿದ ರಕ್ಷೆಯ ಪ್ರತಿಕವಾದ ರಾಖಿ ಹಬ್ಬದ ಮಹತ್ವವನ್ನು ದೇಶಕ್ಕೆ ಸಾರುತ್ತ ಆಚರಿಸಿದರು.

ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 73ನೇ ಸ್ವಾತಂತ್ರ್ಯದಿನಾಚಾರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಶಾಲಾ ಮಕ್ಕಳು ತ್ರೀವರ್ಣ ಧ್ವಜಾಕೃತಿಯಲ್ಲಿ ಅರಳಿದ ರಕ್ಷೆಯ ಪ್ರತಿಕವಾದ ರಾಖಿ ಹಬ್ಬದ ಮಹತ್ವವನ್ನು ದೇಶಕ್ಕೆ ಸಾರುತ್ತ ಸ್ವಾತಂತ್ರ್ಯೋತ್ವವನ್ನು ಆಚರಿಸಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮಾಜಿ ಹಾನರರಿ ಕ್ಯಾಪ್ಟನ್ ನಾರಾಯಣ ಸೂರ್ಯವಂಶಿ ನಮ್ಮ ಬಾರತ ದೇಶವು ನಾಲ್ಕು ಬಾರಿ ವೈರಿ ರಾಷ್ಟ್ರಗಳೊಂದಿಗೆ ಯುದ್ಧಮಾಡಿ ಜಯ ಸಾಧಿಸಿದೆ ಅದಕ್ಕೆ ಸೈನಿಕರ ತ್ಯಾಗ ಬಲಿದಾನ ಹಾಗೂ ಆಧುನಿಕ ತಂತ್ರಜ್ಞಾನವೇ ಕಾರಣ ಎಂದರು. ಇತ್ತೀಚಿನ ದಿನಗಳಲ್ಲಲಿ ಜಗತ್ತಿನ ಎಲ್ಲ ರಾಷ್ಟ್ರಗಳು ಭಾರತದತ್ತ ಸ್ನೇಹ ಹಸ್ತ ಚಾಚುತ್ತಿದೆ ಅದಕ್ಕೆ ಕಾರಣ ದೇಶವನ್ನು ಮುನ್ನಡೆಸುವ ಸರಕಾರವೇ ಕಾರಣ ಎಂದರು.

ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಮಾಂಡಿಗ ಆಫೀಸರ್ ಸುರೇಶ ಮುರಗೆ, ಭೂಮಿಯ ಮೇಲಿನ ಸ್ವಾರ್ಗ ಕಾಶ್ಮೀರ ಅದು ದೇಶವ ಅವಿಭಾಜ್ಯ ಅಂಗವಾಗಿದೆ 370 ವಿಧಿ ರದ್ಧತಿಗು ಮುನ್ನ ಅಲ್ಲಿನ ಚಿತ್ರಣ ಬೇರೆಯಾಗಿತ್ತು, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಲ್ಲಿನ ಮುಗ್ದ ಜನತೆಗೆ ದಾರಿ ತಪ್ಪಿಸುತ್ತಿದ್ದರು ವಿಶೇಷ ಸ್ಥಾನಮಾನ ರದ್ದಾದನಂತರ ಅಲ್ಲಿನÀ ಸಂಪೂರ್ಣ ಚಿತ್ರಣ ಬದಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ ಅನನ್ಯ ಅವರ ತ್ಯಾಗ ಬಲಿದಾನವೇ ನಮಗೆ ಶ್ರೀರಕ್ಷೆ ಎಂದರು. ನೆರೆ ಸಂತ್ರಸ್ತರನ್ನು ಕಾಪಾಡುವುಲ್ಲಿ ಅವರ ಕಾರ್ಯ ಶ್ಲಾಘನೀಯ.

ಇದೇ ಸಂದರ್ಭದಲ್ಲಿ ವಿಜ್ಞಾನ ರಕ್ಷಣಾ ವಸ್ತು ಪ್ರದರ್ಶನವನ್ನು ಮಕ್ಕಳಿಂದ ಪ್ರದರ್ಶನವಾಯಿತು. ಇದರಿಂದ ಮಕ್ಕಳಲ್ಲಿ ದೇಶದ ಭದ್ರತೆಗೆ ಸೈನಿಕರ ಪಾತ್ರ ಕಾರ್ಯ ಹಾಗೂ ಸೈನ್ಯಕ ಸೇರಲು ಮಕ್ಕಳಲ್ಲಿ ಅಭಿರುಚಿ ಬೆಳೆಸುವುದು ಇದರ ಉದ್ದೇಶ.

ಈ ಸಂದರ್ಭದಲ್ಲಿ ಹಾಸ್ಯಕಲಾವಿದ ಪ್ರಶಾಮತ ಚೌದ್ರಿ, ಗಾಯಕ ವಿರೇಶ ವಾಲಿ, ಆಡಳಿತಾಧಿಕಾರಿಗಳಾದ ಸುನೀಲ್ ನಾವಲಗಿ, ಅಮರೇಶ ಅಳಗುಂಡಗಿ, ಮುಖ್ಯ ಗುರುಗಳಾದ ಎಸ್.ಎಸ್. ದೊಡಮನಿ, ಎ.ಬಿ. ಹೆಗಳಾಡಿ, ಎನ್.ಜಿ. ಯರನಾಳ, ಶ್ವೇತಾ ಕುಲಕಣ ್, ಮುಸ್ತಾಕ ತಿಕೋಟಾ, ಬಿ.ಎಸ್. ಹತ್ತಿ. ಜಾಸ್ಮೀನ ಕಂದಗಲ, ಬಸವರಾಜ ವಾಲಿಕಾರ ಹಾಗೂ ಎಲ್ಲ ಶಿಕ್ಷಕವೃಂದ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಅಕ್ಷತಾ ಮತ್ತು ಭಾಗ್ಯಶ್ರೀ ದೊಡಮನಿ ನಿರೂಪಿಸಿದರು, ಸ್ವಾತಿ ಸ್ವಾಗತಿಸಿದರು, ಅಶೋಕ ಬೂದಿಹಾಳ ವಂದಿಸಿದರು.

Leave a Reply

Your email address will not be published. Required fields are marked *

Post comment