ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಸೇವೆ ಪ್ರಾರಂಭ ಪಾಲಕರ ಹರ್ಷ

ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಸೇವೆಯನ್ನು ಪ್ರತಿತಿಂಗಳ ಮೊದಲನೇ ಹಾಗೂ ಎರಡನೇ ರವಿವಾರದಂದು ಕೇಂದ್ರ ಬಸ್ ನಿಲ್ದಾಣದಿಂದ ಇಟ್ಟಂಗಿಹಾಳದ ಎಕ್ಸಲಂಟ್ ಶಾಲೆವರೆಗೆ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಸಂಚರಿಸಲಿವೆ.

ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡಿ ಪ್ರತಿ ತಿಂಗಳ ಮೊದಲನೇ ಹಾಗೂ 2ನೇ ರವಿವಾರದಂದು 9 ರಿಂದ ಸಂಜೆ 5 ರವರೆಗೆ ಬಸ್ ಸೇವೆಯನ್ನು ನೀಡಲಿದೆ, ಪಾಲಕರ ವಿನಂತಿ ಮೇರೆಗೆ ಕೆ.ಎಸ್.ಆರ್.ಟಿ. ಸಿ ವ್ಯವಸ್ಥಾಪಕರಾದ ಸಿದ್ದಪ್ಪ ಗಂಗಾಧರ ಜನದಟ್ಟಣಯನ್ನು ನೋಡಿ ಇಟ್ಟಂಗಿಹಾಳದ ವರಗೂ ಬಸ ಸೇವೆಯನ್ನು ನೀಡಲಾಗುವುದೆಂದು ಬರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಭಾಗಿಯ ಸಂಚಾರಿ ಅಧಿಕಾರಿ ದೇವಾನಂದ ಬಿರಾದಾರ, ಶಾಲಾ ಸಂಯೋಜಕ ಎನ್.ಜಿ. ಯರನಾಳ, ಮುಖ್ಯಗುರುಗಳಾದ ಎಸ್.ಬಿ. ಹೆಗಳಾಡಿ,ಬೀಮರಾಯ ತಳವಾರ, ಶಿವಕುಮಾರ ಶಿರಕನಹಳ್ಳಿ, ಮುಸ್ತಾಕ ತಿಕೋಟಾ, ಪ್ರಕಾಶ ಲಿಂಗದಳ್ಳಿ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Post comment