72nd Independence Day Celebration

ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಸ್ವಚ್ಛ ಭಾರತದ ಅಭಿಯಾನದ ಮಹತ್ವವನ್ನು ಸಾರುವ ಉದ್ದೇಶದಿಂದ “ಸ್ವಚ್ಛ ಭಾರತದ ಲಾಂಛನ” ರೂಪದಲ್ಲಿ ಆಸೀನರಾಗಿ ಸ್ವಚ್ಛ ಭಾರತದ ಸಂದೇಶ ಸಾರಿದರು. ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 72 ನೇ ಸ್ವಾತಂತ್ರ್ಯ ದಿನಚಾರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಮಹಾತ್ಮಾ ಗಾಂಧಿಜೀಯವರ ಸ್ವಚ್ಛ ಭಾರತದ ಅಭಿಯಾನದ ಮಹತ್ವವನ್ನು ಸಾರುವ ಉದ್ದೇಶದಿಂದ “ಸ್ವಚ್ಛ ಭಾರತದ ಲಾಂಛನ” ರೂಪದಲ್ಲಿ ಆಸೀನರಾಗಿ ಸ್ವಚ್ಛ ಭಾರತದ ಸಂದೇಶ ಸಾರಿದರು. ಈ ಸಂದರ್ಭದಲ್ಲಿ…

International Youth Day

ಅಂತರಾಷ್ಟ್ರೀಯ ಯುವ ದಿನಾಚರಣೆ ಸಕಾರಾತ್ಮಕ ಮನೋಭಾವನೆಗಳು ಸಾಧನೆಗೆ ರಹದಾರಿ ಡಾ. ಸಿ. ರಾಮರಾವ ಅಭಿಮತ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಅಂತರಾಷ್ಟ್ರೀಯ ಯುವ ದಿನಾಚರಣೆ ಯನ್ನು ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ರೋಟರಿ ಕ್ಲಬ್ ಬಿಜಾಪುರ ಉತ್ತರ ವಿಭಾಗ ಸಹಭಾಗಿತ್ವದಲ್ಲಿ ಹಮ್ಮೀಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸೈನಿಕ ಶಾಲೆಯ ಪ್ರಾಧ್ಯಾಪಕರು ಹಾಗೂ ರೋಟರಿ ಕ್ಲಬಿನ್ ಸದಸ್ಯ ಡಾ. ಸಿ. ರಾಮರಾವ ಮಾತನಾಡಿದ ಅವರು ಯುವಕರ ಸಕಾರಾತ್ಮಕ ಮನೋಭಾವನೆಗಳು ಸಾಧನೆಗೆ ರಹದಾರಿಯಾಗಿವೆ, ಯುವಕರಲ್ಲಿ ಮುಖ್ಯವಾಗಿ…

Sports News

ಎಕ್ಸಲಂಟ್ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ತಾಲ್ಲೂಕ ಮಟ್ಟಕ್ಕೆ ಆಯ್ಕೆ ಇದೇ ಶುಕ್ರವಾರ ಇಟ್ಟಂಗಿಹಾಳದ ಸರಕಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕನ್ನೂರ ವಲಯ ಮಟ್ಟದ ಕ್ರೀಡಾಕುಟ 2018-19 ರಲ್ಲಿ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ತಾಲ್ಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಶ್ರೇಯಾ ಪತಂಗಿ 200 ಮೀ.ಓಟದಲ್ಲಿ ಪ್ರಥಮ, ರವಿಕಾಂತ ಪಾಟೀಲ್ 100 ಮೀ. ಪ್ರಥಮ, ಪ್ರದೀಪ ಭಿಮನ 400 ಮೀ. ದ್ವಿತಿಯ, ಖೋ-ಖೋ ಮತ್ತು ಥ್ರೋಬಾಲ್ ಆಟದಲ್ಲಿ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು…

National Girl Child Day Function

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚಾರಣೆಯನ್ನು ಹೆಣ್ಣು ಮತ್ತು ಗಂಡು ದೇಶದ ಎರಡು ಕಣ್ಣು : ಸ್ತೀ ರೋಗತಜ್ಞ ಡಾ|| ರಾಜಶ್ರೀ ಅಕ್ಕಿ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚಾರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಮಾತನಾಡಿದ ವಿಜಯಪುರ ಖ್ಯಾತ ಸ್ತೀ ರೋಗತಜ್ಞ ಡಾ|| ರಾಜಶ್ರೀ ಅಕ್ಕಿ ಹೆಣ್ಣು ಮತ್ತು ಗಂಡು ದೇಶದ ಎರಡು ಕಣ್ಣು, ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ,ಸಾಮಾಜಿಕವಾಗಿ,ಭೌಧಿಕವಾಗಿ ಮುಖ್ಯವಾಹಿನಿಗೆ ಬರಬೇಕು. ಹೆಣ್ಣೊಂದು ಕಲೆತರೆ ಶಾಲೆಯೊಂದು ತೆರೆದಂತೆ, ಹೆಣ್ಣು ಮಕ್ಕಳು ಮುಖ್ಯವಾಗಿ…

Excellent school sports

ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಧೃಡರಾಗಲು ಕ್ರೀಡೆಯ ಪಾತ್ರ ಅನನ್ಯ ಇದೇ ಶನಿವಾರ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಶಾಲಾ ವಾರ್ಷೀಕೋತ್ಸವಕ್ಕೆ ಸಂಸ್ಥೆಯ ನಿರ್ದೇಶಕ ಹಾಗೂ ಮುಖ್ಯ ಅತಿಥಿಯಾಗಿ ಮಂಜುನಾಥ ಕೌಲಗಿ ಕ್ರೀಡಾ ಜ್ಯೋತಿ ಬೆಳಗುವ ಮುಖಾಂತರ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಕ್ರೀಡೆಗಳು ಮಹತ್ವದ ಪಾತ್ರ ವಹಿಸುತ್ತವೆ, ಕ್ರೀಡೆಗಳು ಪಠ್ಯೇತರ ಚಟುವಟಿಕೆಗಳಾಗಿದ್ದು, ಮಕ್ಕಳ ಸಾಧನೆಗೆ ಪೂರಕವಾದ ಚಟುವಟಿಕೆಯಾಗಿದೆ ಎಂದರು. ಮುಖ್ಯವಾಗಿ ಮಕ್ಕಳ ಹಾಗೂ ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ, ಮಾನಸಿಕವಾಗಿ ಸಧೃಡರಾಗಲು ಸಹಾಯವಾಗಿದೆ…

Science Exhibition

ನೀರು ಬರುಬಳಕೆಯ ಮಾದರಿ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಗೆ (ಪ್ರಥಮ ಸ್ಥಾನ) ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅರಕೇರಿ ಗ್ರಾಮದ ಮುರಾರ್ಜೀ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡ ತಾಲೂಕ ಮಟ್ಟದ ಪ್ರೌಢಶಾಲಾ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು “ನೀರು ಮರು ಬಳಕೆ ಮಾದರಿ”ಯನ್ನು ತಯಾರಿಸಿದ್ದು ನೇಹಾ ಶಿವಾನಂದ ಕೆಲೂರ ಹಾಗೂ ಸೃಷ್ಠಿ ಹತ್ತರಕಿಹಾಳ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಚ್ಚಲು ನೀರುನ್ನು ವಿವಿಧ ಹಂತದಲ್ಲಿ ಸ್ವಚ್ಚಮಾಡಿ ಅದನ್ನು…