ಎಕ್ಸಲಂಟ್ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಶುಭಕೋರುವ ಸಮಾರಂಭ
ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಶುಭಕೋರುವ ಸಮಾರಂಭ ಹಾಗೂ ಕಳೆದ ವರ್ಷದಲ್ಲಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಹಮ್ಮೀಕೊಳ್ಳಲಾಗಿತ್ತು. ಪ್ರಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಕಳೆದ ವರ್ಷದ ಎಸ್.ಎಸ್.ಎಲ್.ಸಿ. ವಾರ್ಷೀಕ ಪರೀಕ್ಷೆಯ ವಿಷಯಗಳಲ್ಲಿ ಪ್ರತಿಶತ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ನಗದು ಬಹುಮಾನ ನೀಡುವುದು ನಮ್ಮ ಎಕ್ಸಲಂಟ್ನ ಸಂಸ್ಕøತಿ ಏಕೆಂದರೆ ಪ್ರಸ್ತುತ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಮಕ್ಕಳು ಆಂತರಿಕವಾಗಿ ಸಧೃಡರಾಗಲು ಈ ಕಾರ್ಯಕ್ರಮ ಒಂದು ಪ್ರೇರಣೆ ಎಂದರು.
ಕಾರ್ಯಕ್ರಮವನು ಉದ್ಘಾಟಿಸಿ ಮಾತನಾಡಿದ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಹಾಗೂ ಅಮ್ಮನ ಮಡಿಲು ಚಾರಿಟೇಬಲ್ ಟ್ರ್ಸ್ಟಿನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ರಾಜ್ಯದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿಜಯಪುರದ ಎಕ್ಸಲಂಟ್ ಶಿಕ್ಷಣ ಸಂಸ್ಥೆ ಜ್ಯೋತಿಯಂತೆ ಪ್ರಜ್ವಲಿಸುತ್ತಿದೆ, ಮುಖ್ಯವಾಗಿ ಗ್ರಾಮೀಣ ಪ್ರತಿಭೆಗಳನ್ನು ಈ ಸಂಸ್ಥೆ ಗುರುತಿಸಿ ಮಕ್ಕಳನ್ನು ಮುಖ್ಯವಾಹಿನಿಗೆ ತರುತ್ತಿದೆ ಎಂದರು. ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಿ ನಾಡಿನ ಧ್ವನಿಯಾಗಬೇಕೆಂದರು. ವಿದ್ಯಾರ್ಥಿಗಳು ತಪ್ಪು ದಾರಿ ಹಿಡಿಯದೆ ಉತ್ತಮ ಶಿಕ್ಷಣ ಪಡೆದು ತಂದೆ, ತಾಯಿ, ಶಿಕ್ಷಕ ಹಾಗೂ ಸಂಸ್ಥೆಯ ಹೆಸರು ತರುವಂತಾಗಬೇಕೆಂದರು. ಸೊಲೆ ಗಲವಿನ ಸೋಪಾನ ಎಂಬ ನಾನ್ನುಡಿಯಂತೆ ಸೋಲನ್ನೆ ಗೆಲುವಿನ ಮೆಟ್ಟಿಲನ್ನಾಗಿಸಿಕೊಳ್ಳಬೇಕೆಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಉಪನ್ಯಾಸಕ ಶಿವಾನಂದ ಕಲ್ಯಾಣ , ಎಸ್.ಎಸ್.ಎಲ್.ಸಿ ಪರೀಕ್ಷೆ ಎದುರಿಸುವ ಮಕ್ಕಳು ಧೃತಿಗೆಡದೆ ಎಕಾಗ್ರತೆಯಿಂದ ಅಧ್ಯಯನ ಮಾಡಿ ಪ್ರಸನ್ನೆತೆಯಿಂದ ಪರೀಕ್ಷೆ ಎದುರಿಸಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಎಕ್ಸಲಂಟ್ ಸಂಸ್ಥೆಯನ್ನು ಪಾಲಕರು ಬೆಳಸಿದರು ಇದರ ಯಶಸ್ಸಿನ ಪತಾಕಿ ವಿದ್ಯಾರ್ಥಿಗಳು ಹಾರಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಸಾಧನೆ ಸಾಧಕನ ಸೊತ್ತೆ ಹೊರತು ಸೋಮಾರಿಯ ಸೊತ್ತಲ್ಲ, ಸಾಧನೆ ಮಾಡುವ ಸಂದರ್ಭದಲ್ಲಿ ಕಷ್ಟಗಳ ಸರಮಾಲೆ ಎದುರಾದರು ಅದನ್ನು ಮೆಟ್ಟಿನಿಂತು ಉತ್ತಮ ಸಾಧನೆ ಮಾಡಬೇಕೆಂದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ರಾಜಶೇಖರ ಕೌಲಗಿ, ದಯಾನಂದ ಕೆಲೂರ, ಮಂಜುನಾಂಥ ಕೌಲಗಿ, ಮುಖ್ಯಗುರುಗಳಾದ ಎಸ್.ಎಸ್.ದೊಡಮನಿ, ಎಸ್.ಬಿ. ಹೆಗಳಾಡಿ, ಐ.ಎಮ್. ಹಿಟ್ನಳ್ಳಿ, ಬಿ.ಡಿ.ವಾಲಿಕಾರ, ಶಾಲೆಯ ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿಗಳಾದ ಕಾರ್ತಿಕ ಕೆಲೂರ, ರಮ್ಯ ಜೋಷಿ, ಹಾಗೂ ಎ.ಬಿ. ಮಾಲಗಾರ, ಪ್ರೀತಿ ಕಾಳೆ, ಪ್ರಶಾಮತ ಪರಜಣ್ಣವರ, ಎಲ್ಲ ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಬಿ.ಎಸ್. ಹತ್ತಿ ಸ್ವಾಗತಿಸಿದರು, ಸ್ನೇಹಲತಾ ಹಿರೇಮಣ ನಿರೂಪಿಸಿದರು, ಅಶೋಕ ಬೂದಿಹಾಳ ವಂದಿಸಿದರು.