ತಂತ್ರಜ್ಞಾನಕ್ಕನುಗುಣವಾಗಿ ಶಿಕ್ಷಣ ನೀಡಿ ಸೈಯದ ಹಬೀಬ ಪಾಶಾ ಶಿಕ್ಷಕರಿಗೆ ಸಲಹೆ

ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಬೆಂಗಳೂರಿನ ಗ್ರ್ಯಾನಸ್ಟಾಂಜ್ ಇಂಪ್ಲೆಕ್ಸ್  ನಿರ್ದೇಶಕ ಸಲಹಗಾರರು ಸೈಯದ ಹಬೀಬ ಪಾಶಾ ಶಿಕ್ಷಕರಿಗೆ ವಿಶೇಷ ಉಪನ್ಯಾಸ ನಿಡುತ್ತಾ ಶಿಕ್ಷಕರು ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ಹೊಂದಿಕೊಳ್ಳುತ್ತ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಶಿಕ್ಷಕರು ಆಸಕ್ತಿ, ಜ್ಞಾನ,  ಕೌಶಲ್ಯ ಹಾಗೂ ಮೌಲ್ಯಗಳನ್ನು  ಮೈಗೂಡಿಸಿಕೊಂಡಾಂಗ ಮಕ್ಕಳಲ್ಲಿ ಬದಲಾವಣೆ ತರಲು ಸಾಧ್ಯ.  ಶಿಕ್ಷಕರು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತಬೇಕು ಮಕ್ಕಳು ಶಾಲೆಯಲ್ಲಿ ಶಿಕ್ಷಕರನ್ನು ಅನುಕರಿಸುತ್ತಾರೆ ಇದರಿಂದ ಶಿಕ್ಷಕರು ಉನ್ನತ ಜ್ಞಾನ, ಕ್ರಿಯಾಶೀಲತೆ ಮಕ್ಕಳಿಗೆ ಉತ್ತಮ ಭೊಧನೆ ಅಳವಡಿಸಿಕೊಂಡು ಮಕ್ಕಳ ಜ್ಞಾನಕ್ಕೆ ತಕ್ಕಂತೆ ಭೋದಿಸಬೇಕು. ಸಾಮಾನ್ಯ ಶಿಕ್ಷಕರು ಸಾಮಾನ್ಯ ವಿಷಯವನ್ನು ಭೊಧಿಸುತ್ತಾರೆ, ಅಸಮಾನ್ಯ ಶಿಕ್ಷಕರು ಅಸಾಮಾನ್ಯ ವಿಷಯವನ್ನು ಭೋಧಿಸುತ್ತಾರೆ. ಶಿಕ್ಷರು ಸದಾ ಕ್ರೀಯಾಶೀಲತೆಯಿಂದ ಕೂಡಿರಬೇಕು.

ಶಿಕ್ಷಕರು ಸಕಾರಾತ್ಮಕ ಮನೋಭಾವನೆಯನ್ನು ಅಳವಡಿಸಿಕೊಂಡು ಮಕ್ಕಳಿಗೆ ಸಕಾರಾತ್ಮಕ ಮನೋಭಾವನೆಯನ್ನು ಬಿತ್ತಬೇಕು. ಶಿಕ್ಷಕರು ಭೊಧನೆಯನ್ನು ಪ್ರೀತಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಮಕ್ಕಳ ಅಗತ್ಯಕ್ಕೆ ತಕ್ಕಂತೆ ಶಿಕ್ಷಣ ನೀಡುವುದು ಶಿಕ್ಷಕರ ಕರ್ತವ್ಯ ಎಂದರು. ಪ್ರಸ್ತುತ ಸಮಾಜದಲ್ಲಿ ಮಕ್ಕಳು ತಂತ್ರಜ್ಞಾವನ್ನು ಅಭ್ಯಸಿಸಿ ಶಿಕ್ಷಕರಿಗಿಂತ ಒಂದು ಕೈ ಮುಂದೆ ಇದ್ದಾಗ, ಶಿಕ್ಷಕರು ಅವರಿಗಿಂತ ಹೆಚ್ಚು ಅಧ್ಯಯನ ಕೈಗೊಳ್ಳುವುದು ಅತೀ ಅವಶ್ಯಕ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಬಸವರಾಜ ಕೌಲಗಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿದಾಗ ದೇಶದ ಅಭಿವೃದ್ಧಿ ಸಾಧ್ಯ. ಶಿಕ್ಷಕರು ಸತ್ಯ, ಪ್ರಾಮಾಣ ಕತೆ ಹಾಗೂ ನೈತಿಕತೆಯನ್ನು ಮಕ್ಕಳಿಗೆ ತಿಳಿಸಬೇಕು ಎಂದರು.
ಈ ಸಂದರ್ಭದಲ್ಲಿ ನಿರ್ದೇಕರುಗಳಾದ ರಾಜಶೇಖರ ಕೌಲಗಿ, ದಯಾನಂದ ಕೆಲೂರ, ಮಂಜುನಾಥ ಕೌಲಗಿ, ಆಡಳಿತಧಿಕಾರಿ ರಾಜಶೇಖರ ಮೊಟಗಿ, ಮುಖ್ಯಗುರುಗಳಾದ ಎಸ್.ಎಸ್.ದೊಡಮನಿ, ಎಸ್.ಬಿ. ಹೆಗಳಾಡಿ, ಜೆ.ಎಮ್.ಗಂಗಾಧರ, ಶ್ರೀಮತಿ ಅನುಸೂಯಾ, ಸಿ.ಎಸ್.ವಾಲಿ, ಹುಗ್ಗೆಣ್ಣವರ, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕುಮಾರಿ ಸಹನಾ ಅಬಿಗೇರ ಸ್ವಾಗತಿಸಿದರು, ದಕ್ಷಾ ನಿಕ್ಕಂ, ಸೃಷ್ಠಿ ಬಿರಾದಾರ ನೀರೂಪಿಸಿದರು, ಅಕ್ಷತಾ ಹಿರೇಕುರಬರ ವಂದಿಸಿದರು.

Leave a Reply

Your email address will not be published. Required fields are marked *

Post comment