ಎಕ್ಸಲಂಟ್ ವಿದ್ಯಾರ್ಥಿ ಚದುರಂಗ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಹಾಗೂ ಯೋಗ ಸ್ಪರ್ಧೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ

ದಿನಾಂಕ 18-9-2018 ಮಂಗಳವಾರದಂದು ಡಿ.ಎನ್. ದರಬಾರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಚದುರಂಗ (ಚೆಸ್) ಮತ್ತು ಯೋಗಾಸನ ಸ್ಪರ್ಧೆಯಲ್ಲಿ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಚದುರಂಗ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಹಾಗೂ ಯೋಗಾಸನ ಸ್ಪರ್ಧೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಚದುರಂಗ ಸ್ಪರ್ಧೆಯಲ್ಲಿ ಬಸಮ್ಮ ಮುರಾಳ ರಾಜ್ಯ ಮಟ್ಟಕ್ಕೆ ಆಯ್ಕೆಯಾದರೆ. ಮೇಘಾ ಅಳ್ಳಗಿ, ಸಿದ್ದನಗೌಡ ಪಾಟೀಲ, ಪವನಕುಮಾರ ಡೊಮನಾಳ ಯೋಗಾಸನ ಸ್ಪರ್ಧೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಒಂದು ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಆಡಳಿತಾಧಿಕಾರಿ ರಾಜಶೇಖರ ಮೋಟಗಿ, ಮುಖ್ಯ ಗುರುಗಳಾದ ಎಸ್.ಎಸ್.ದೊಡಮನಿ, ಎಸ್. ಬಿ. ಹೆಗಳಾಡಿ, ಯೋಗ ಶಿಕ್ಷಕ ವಿನಾಯಕ ದ್ಯಾವನ್ನವರ, ದೈಹಿಕ ಶಿಕ್ಷಕಿ ಪ್ರೀತಿ ಕಾಳೆ ಶಿಕ್ಷಕವೃಂದ ಹಾಗೂ ಸಿಬ್ಬಂದಿವರ್ಗ ಹರ್ಷವ್ಯಕ್ತ ಪಡಿಸಿದೆ.

Leave a Reply

Your email address will not be published. Required fields are marked *

Post comment