ಕೊಡಗು ಮತ್ತು ಮಡಿಕೇರಿ ನಿರಾಶ್ರಿತರಿಗೆ ಎಕ್ಸಲಂಟ್ ಶಾಲಾ ಮಕ್ಕಳಿಂದ 80  ಸಾವಿರ ರೂ. ಚಕ್ ಮುಖ್ಯ ಮಂತ್ರಿ ಪರಿಹಾರ ನಿಧಿಗೆ.

ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ಕೊಡಗು ಮತ್ತು ಮಡಿಕೇರಿ ನಿರಾಶ್ರಿತರಿಗೆ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ 80000/-  ಸಾವಿರ ರೂಗಳ ಚೆಕ್‍ನ್ನು ಎಕ್ಸಲಂಟ್ ವಿದ್ಯಾರ್ಥಿಗಳಿಂದ ಹಸ್ತಾಂತರಿಸಲಾಯಿತು. 25 ಸಾವಿರ ರೂ. ಮಕ್ಕಳು ತಮ್ಮ ಹುಟ್ಟು ಹಬ್ಬದಂದು ದುಂದು ವೆಚ್ಚ ಮಾಡದೇ ಅನಾಥರಿಗೆ ಸಂಗ್ರಹಿಸದ ಹಣ, 40 ಸಾವಿರ ರೂ ಮಕ್ಕಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂಧಿ ಹಾಗೂ ಡ್ರಾವೈರ ಕ್ಲೀನಗಳಿಂದ ಸಂಗ್ರಹಿಸಿದ ಮೊತ್ತ ಮತ್ತು ಸಂಸ್ಥಾಪ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಅವರ ವೈಯಕ್ತಿಕ 15 ಸಾವಿರ ರೂಗಳು ನೀಡಲಾಯಿತು.
ಮಕ್ಕಳನ್ನುದ್ದೇಶಸಿ ಮಾತನಾಡಿದ sಸಂಸ್ಥಾಪ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಮಕ್ಕಳು ಮುಖ್ಯವಾಗಿ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳಸಿಕೊಳ್ಳಬೇಕು ನಮ್ಮ ರಾಜ್ಯದ ಕೊಡಗು ಹಾಗೂ ಮಡಿಕೇರಿಯಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಲಕ್ಷಾಂತರ ಜನರ ಜೀವನ ಅಸ್ತವ್ಯಸ್ತವಾಗಿದೆ ಸಾವು ನೋವುಗಳು ಸಂಭವಿಸಿವೆ ಎಂದರು. ನಿರಾಶ್ರಿತರಿಗೆ ಸಹಾಯ ಹಸ್ತ ಚಾಚುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಶಾಲಾ ಸಂಯೋಜಕ ಎನ್.ಜಿ. ಯರನಾಳ ಮಾತನಾಡುತ್ತ ಮಕ್ಕಳು ದೇವರ ಸಮಾನರು ಅವರ ನಿಸ್ವಾರ್ಥ ಮನಸ್ಸಿನಿಂದ ಸಂಗ್ರಹಗೊಂಡ ಮೊತ್ತವು ನಿರಾಶ್ರಿತರಿಗೆ ಸಹಾಯವಾಗಲಿದೆ ಎಂದರು ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು ಶಾಲಾ ಕಾಲೇಜುಗಳು ದೇಣ ಗೆ ಸಂಗ್ರಹಿಸಿ ಮಾನವೀಯತೆ ಮೆರೆಯಬೇಕೆಂದು ಮನವಿ ಮಾಡಿಕೊಮಡರು.  ಮುಖ್ಯ ಗುರುಗಳಾದ ಎಸ್.ಬಿ. ಹೆಗಳಾಡಿ ಮಾತನಾಡುತ್ತ ಕೇವಲ ಒಂದೇ ದಿನದಲ್ಲಿ ಇಷ್ಟೊಂದು ಮೊತ್ತ ಮಕ್ಕಳಿಂದ ಸಂಗ್ರಹ ಗೊಂಡಿದೆ ಸಹಾಯ ಮಾಡುವ ಮನಸ್ಸಿದ್ದರೆ ಸಾಕು ದಾರಿಗಳು ತಾನಾಗೇ ತೆರೆಯುತ್ತವೆ. ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿದ ಅವರು ಎಕ್ಸಲಂಟ್ ಶಾಲೆಯು ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು ಬೆಳಸುತ್ತಿದೆ ಆದ್ದರಿಂದ ಈ ಶಾಲೆ ಶಿಕ್ಷಣ, ಕ್ರೀಡೆ ಹಾಗೂ ಸಹಾಯ ಹಸ್ತದಲ್ಲೂ ಮಕ್ಕಳಿಗೆ ಮಾನವೀಯತೆ ಪಾಠವನ್ನು ಕಲಿಸುತ್ತಿರುವುದು ಇದಕ್ಕೆ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ಔರಂಗಬಾದನ ಐ.ಎ.ಎಸ್. ಅಧಿಕಾರಿ ದೀಪಾ ಮುಧೋಳ, ಜ್ಯೋತಿಪ್ರಕಾಶ ಮುದ್ದೇಬಿಹಾಳ, ಶಿವುಕುಮಾರ ಶಿರಕನಹಳ್ಳಿ, ಬಿ.ಎಸ್.ತಳವಾರ,  ಶ್ರೀಶೈಲ ರಬಿನಾಳ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Post comment