Yoga Day-2019

ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚಾರಣೆಯನ್ನು ಆಚರಿಸಲಾಯಿತು. ಸುಮಾರು 600 ವಿದ್ಯಾರ್ಥಿಗಳಿಂದ ಯೋಗ ಮತ್ತು ಆಸನಗಳನನ್ನು ಮಾಡಲಾಯಿತು. ಸೂರ್ಯ ನಮಸ್ಕಾರ, ಪ್ರಾಣಾಯಾಮ, ವಜ್ರಾಸನ, ಪರ್ವತಾಸನ, ಪದ್ಮಾಸನ, ಅರ್ಧಪದ್ಮಾಸನ, ಸರ್ವಂಗಾಸನ, ವಕ್ರಾಸನ, ವೀರಾಸನ, ಶವಾಸನ, ವಿವಿಧ ಆಸನಗಳನ್ನು ಮಕ್ಕಳು ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಸುಮಾರ 152 ರಾಷ್ಟ್ರಗಳು ಯೋಗಾಸನವನ್ನು ಆಚರಿಸುತ್ತಿದ್ದಾರೆ, ಇಡೀ ರಾಷ್ಟ್ರ ಯೋಗದ ಮಹತ್ವವನ್ನು ಅರಿತು ಯೋಗವನ್ನು ಸ್ವೀಕರಿಸಿದ್ದಾರೆ. ಜೋತೆಗೆ ಯೋಗದಿಂದ ದೇಹ…

Details

Science Exhibition Function

ಎಕ್ಸಲಂಟ್ ವಿದ್ಯಾರ್ಥಿಗಳಿಂದ ವಿಜ್ಞಾನ ಪಾತ್ಯಕ್ಷಿಕೆ ಪ್ರದರ್ಶನ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚಾರಣೆಯ ಅಂಗವಾಗಿ ಹಮ್ಮಿಕೊಂಡ ವಿಜ್ಞಾನ ಪಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಖ್ಯಾತ ಕೃಷಿ ವಿಜ್ಞಾನಿ ಪರಶುರಾಮ ಪಾತ್ರೋಟಿ ಎಕ್ಸಲಂಟ್ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಮಕ್ಕಳ ವೈಜ್ಞಾನಿಕ ಪ್ರತಿಭೆಗಳಿಗೆ ಪ್ರೋತ್ಸಾಹ ಅನನ್ಯವಾಗಿದೆ. ಈ ಪ್ರದರ್ಶನದಲ್ಲಿ ಮಕ್ಕಳು ಮುಖ್ಯವಾಗಿ ಕೃಷಿ, ಪರಿಸರ, ಟ್ರಾಫಿಕ್ ಸಮಸ್ಯಾಪರಿಹಾರ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರದರ್ಶನಗಳು ಮಕ್ಕಳಿಂದ ಅನಾವರನಗೊಂಡಿವೆ ಎಂದರು, ಇದರಿಂದ ಮಕ್ಕಳು ಯಾವ ಕ್ಷೇತ್ರದಲ್ಲಿ ಮುಖಮಾಡುತ್ತಿದ್ದಾರೆ…

Details

District Parisar Mitra Prize

ಪರಿಸರ ಮಿತ್ರ (ಹಸಿರು) ಶಾಲೆ 2018-19 ಸಾಲಿನ ಪ್ರಶಸ್ತಿಗೆ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆ ಭಾಜನ ಇದೇ ಮಂಗಳವಾರದಂದು ಹೇಮರಡ್ಡಿ ಮಲ್ಲಮ್ಮ ಕಾರ್ಯಲಯದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವಿಜಯಪುರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸಾರ್ವಜನಿಕ ಶಿಕ್ಷಕಣ ಇಲಾಖೆ ವಿಜಯಪುರ ಸಹಯೋಗದಲ್ಲಿ ಪರಿಸರ ಮಿತ್ರ ಶಾಲಾ ಕಾರ್ಯಕ್ರಮದಲ್ಲಿ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯನ್ನು ಪರಿಸರ ಮಿತ್ರ (ಹಸಿರು ಶಾಲೆ) 2018-19 ರ ವರ್ಷದ ಪ್ರಶಸ್ತಿ ಪತ್ರ ಹಾಗೂ 5000…

Details

ವಿದ್ಯಾರ್ಥಿನಿಯರ ಪ್ರತಿಭಾ ಆವಿಷ್ಕಾರ 2018

ಕರ್ನಾಟಕ ಶಿಕ್ಷಣ ಸಂಸ್ಥೆ ವಿಜಯಪುರ ಇವರು ಹಮ್ಮಿಕೊಂಡ ವಿದ್ಯಾರ್ಥಿನಿಯರ ಪ್ರತಿಭಾ ಆವಿಷ್ಕಾರ 2018 ಇದೇ 11-1-2019 ರಂದು ಜ್ಞಾನ ಜ್ಯೋತಿ ವಸತಿ ಶಾಲೆ ಸೋಲಾಪುರ ರಸ್ತೆಯ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ ರೇನಿಯಾ ಶೆಟ್ಟಿ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಹಾಗೂ ರಮ್ಯ ಜೋಷಿ ಇಂಗ್ಲೀಷ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ತಲಾ 5000 ರೂ ಬಹುಮಾನ ಪಡೆದು ಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Children’s Day

ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿ ಪ್ರತಿನಿಧಿ ರಮ್ಯ ಜೋಷಿ ಮಾತನಾಡಿ ಸತತ ಅಧ್ಯಯನವೇ ಮಕ್ಕಳ ಮೂಲ ಮಂತ್ರವಾಬೇಕು ಇದರಿಂದಲೇ ನಮ್ಮ ಗುರಿ ಸಾಧಿಸಲು ಸಾಧ್ಯ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡಿದ ಅವರು ಮಕ್ಕಳು ಆಸಕ್ತಿ ಇಲ್ಲದ ವಿಷಯದಲ್ಲಿ ಪಾಲಕರು ಒತ್ತಡ ಹೇರಿದಾಗ ಮಕ್ಕಳು ಅದನ್ನು…

Kannada Rajyotsav

ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 63ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸುಮಾರು 120 ಅಡಿ ಉದ್ದ ಹಾಗೂ 80 ಅಡಿ ಅಗುಲದಲ್ಲಿ ಕರ್ನಾಟಕ ನಕ್ಷೆ ಮಕ್ಕಳಿಂದ ರಚನೆಗೊಂಡು, ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಹಲವಾರು ಭಾಷೆಗಳಿಗೆ ನಮ್ಮ ಕನ್ನಡ ಭಾಷೆಯು ಮೂಲಾಧಾರವಾಗಿದೆ, ಯಾರು ಕನ್ನಡವನ್ನು ಉತ್ತಮವಾಗಿ ನಿರ್ರಗಳವಾಗಿ ಮಾತನಾಡಲು…

Valmiki Jayanti

ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಡಳಿತಾಧಿಕಾರಿ ರಾಜಶೇಖರ ಮೋಟಗಿ ಮಹರ್ಷಿ ವಾಲ್ಮೀಕಿ ಮಹಾಕಾವ್ಯ ರಾಮಾಯಣ ಬರೆದು ಅದರಲ್ಲಿ ಭಾರತೀಯ ಸಂಸ್ಕ್ರತಿ ಹಾಗೂ ಸಮಾಜದಲ್ಲಿ ಅನುಸರಿಸಬೇಕಾದ ಮೌಲ್ಯಗಳನ್ನು ತಿಳಿಸಿದ್ದಾರೆ. ಈ ಮಹಾ ಕಾವ್ಯವು ಅನೇಕ ಜನರ ಜೀವನವನ್ನು ಬದಲಿಸಿದ ಸಾಧನಾ ಸಿದ್ಧಿ ಕಾವ್ಯವಾಗಿದೆ ಹಾಗೂ ರಾಮಾಯಣದಲ್ಲಿ ಬರುವ ಒಂದೊಂದು ಸನ್ನಿವೇಶಗಳು ಓದುಗರ ವಿವೇಕ, ಬುದ್ದಿ, ಮನಸ್ಸು ಕ್ರೀಯೆ ಕರ್ಮಗಳನ್ನು ಸೂಕ್ತದಾರಿಯಲ್ಲಿ ನಡೆಸುವ ಕಾರ್ಯಮಾಡುತ್ತದೆ…

Gandhiji and Shastriji jayanti

ಸಹನಾ ಶಕ್ತಿಯು ಆತ್ಮ ವಿಶ್ವಾಸ ಇಮ್ಮಡಿಗೊಳಿಸುವ ಅಸ್ತ್ರ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲಬಾಹದ್ಧೂರ ಶಾಸ್ತ್ರೀಜಿ ಅವರ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡುತ್ತ ವ್ಯಕ್ತಿಗಳಲ್ಲಿ ಮುಖ್ಯವಾಗಿ ಸಹನಾ ಮನೋಭಾವನೆ ಬೆಳಸಿಕೊಳ್ಳಬೇಕು ಗಾಂಧೀಜಿಯವರ ಮೂಲ ತತ್ವವೇ ಸಹನಾ ಶಕ್ತಿಯಾಗಿದೆ ಎಂದರು. ಶಾಂತಿ, ಸತ್ಯಾಗ್ರಹ, ಅಹಿಂಸೆಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಪ್ರಪಂಚವೇ ಗಾಂಧೀಜಿಯವರ ತತ್ವಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಸರ್ವಾಧಿಕಾರಿ ಅಡಾಲ್ಫ…

Chess and Yogasan District level Competition

ಎಕ್ಸಲಂಟ್ ವಿದ್ಯಾರ್ಥಿ ಚದುರಂಗ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಹಾಗೂ ಯೋಗ ಸ್ಪರ್ಧೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ ದಿನಾಂಕ 18-9-2018 ಮಂಗಳವಾರದಂದು ಡಿ.ಎನ್. ದರಬಾರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಚದುರಂಗ (ಚೆಸ್) ಮತ್ತು ಯೋಗಾಸನ ಸ್ಪರ್ಧೆಯಲ್ಲಿ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಚದುರಂಗ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಹಾಗೂ ಯೋಗಾಸನ ಸ್ಪರ್ಧೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಚದುರಂಗ ಸ್ಪರ್ಧೆಯಲ್ಲಿ ಬಸಮ್ಮ ಮುರಾಳ ರಾಜ್ಯ ಮಟ್ಟಕ್ಕೆ ಆಯ್ಕೆಯಾದರೆ. ಮೇಘಾ ಅಳ್ಳಗಿ, ಸಿದ್ದನಗೌಡ…